ಡಾಕ್ಟರ್ ಮಲಿನೇಣಿ ಲಕ್ಷ್ಮಯ್ಯ ಪರಿಚಯ
Posted date: 22 Sun, Dec 2013 – 08:32:11 AM

ಆಂಧ್ರಪ್ರದೇಶದ ವಿಧ್ಯಾ ಸಂಸ್ಥೆ ವಿಭಾಗದಲ್ಲಿ ಮುಂಚೂಣಿಯಲ್ಲಿ ಇರುವ ಡಾಕ್ಟರ್ ಮಲಿನೇಣಿ ಲಕ್ಷ್ಮಯ್ಯ ಅವರು ಮಲಿನೇಣಿ ಲಕ್ಷ್ಮಯ್ಯ ಗ್ರೂಪ್ ಆಫ್ ಕಾಲೇಜಸ್ ಒಡೆಯರಾಗಿ ಅನೇಕ ಬಿರುದುಗಳನ್ನು ರಾಜ್ಯ, ರಾಷ್ಟ್ರ ಅಂತರರಾಷ್ಟ್ರೀಯ ಮಟ್ಟದಲ್ಲಿ ಪಡೆದು ಇದೀಗ ಕನ್ನಡ ಸಿನೆಮಾ ತಯಾರಿಕೆಗೆ ಹೆಜ್ಜೆಯಿಟ್ಟಿದ್ದಾರೆ.ಗುಂಟೂರು ಜಿಲ್ಲೆಯ ಸಿಂಗರಾಯಕೊಂಡ ಡಾಕ್ಟರ್ ಮಲಿನೇಣಿ ಲಕ್ಷ್ಮಯ್ಯ ಅವರು ಸ್ಥಾಪಿಸಿರುವ ವಿಧ್ಯಾ ಸಂಸ್ಥೆಗಳು ಬಹಳ  ಹೆಸರುವಾಸಿ. ದೇಶದ ನಿರುದ್ಯೋಗ ಸಮಸ್ಯೆಯನ್ನು ದೂರಮಾಡಲು ತಾಂತ್ರಿಕ ಶಿಕ್ಷಣ ಬಹು ಮುಖ್ಯ ಎಂದು ಸಾರುವ ಡಾಕ್ಟರ್ ಮಲಿನೇಣಿ ಅವರ ಮಲಿನೇಣಿ ಪೆರುಮಲ್ಲು ಎಜುಕೇಷನಲ್ ಸೊಸೈಟಿ ಈ ನಿಟ್ಟಿನಲ್ಲಿ ಅಗಾದವದ ಕೆಲಸವನ್ನು ಮಾಡುತ್ತಾ ಬಂದಿದೆ.
 
ಡಾಕ್ಟರ್ ಮಲಿನೇಣಿ ಲಕ್ಷ್ಮಯ್ಯ ಅವರಿಗೆ ಹೆಲ್ತ್ ಕೇರ್ ಅಂತರರಾಷ್ಟ್ರೀಯ ಎಕ್ಷ್ಸಲೆಂಸೆ ಪ್ರಶಸ್ತಿ 2005 ರಲ್ಲಿ ಅಂದಿನ ರೆವೆನ್ಯೂ ಖಾತೆ ಮಂತ್ರಿ ಶ್ರೀ ಧರ್ಮನ ಪ್ರಸಾದ ರಾವು ಅವರು ನೀಡಿದ್ದಾರೆ. ಇವರಿಗೆ ಇಂದಿರ ಗಾಂಧಿ ಸದ್ಭಾವನ ಪ್ರಶಸ್ತಿ ನವದೆಹಲಿ ಇಂದ ಲಭಿಸಿದೆ. ವಿಧ್ಯೆ ನೀಡುವುದು ಅವರ ಪರಮ ಗುರಿ ಹಾಗೂ ಧ್ಯೇಯೇ. ಫರ್ಮಾಸಿ, ಇಂಜಿನಿಯರಿಂಗ್, ತಾಂತ್ರಿಕ ಶಿಕ್ಷಣದಲ್ಲಿ ಅನೇಕ ವಿಧ್ಯಾ ಸಂಸ್ಥೆಗಳನ್ನು ಹೊಂದಿರುವ ಇವರು ಒಂದು ತೆಲುಗು ಸಿನೆಮಾ ‘ಕೌರವ ಸಾಮ್ರಾಜ್ಯಮು’ನಿರ್ಮಿಸಿ, 30 ತೆಲುಗು ಸಿನೆಮಗಳಲ್ಲಿ ಅಭಿನಯವನ್ನು ಮಾಡಿರುವರು. ಡಾಕ್ಟರ್ ಡಿ ರಾಮ ನಾಯ್ಡು ಹಾಗೂ ಶ್ರೀ ಕಲ್ಯಾಣ್ ಅವರ ನೆಚ್ಚಿನ ಸ್ನೇಹಿತರು ಆದ ಲಕ್ಷ್ಮಯ್ಯ ಅವರ ಸಲಹೆಯಂತೆ ಕನ್ನಡ ಸಿನೆಮಕ್ಕೆ ಆಗಮಿಸಿದ್ದಾರೆ. ಇದೀಗ ‘ಒಂದು ರೊಮ್ಯಾಂಟಿಕ್ ಕ್ರೈಮ್ ಕಥೆ’ ಸಿನೆಮವನ್ನು ಕನ್ನಡದಲ್ಲಿ ನಿರ್ಮಿಸಲು ಚಂದನವನಕ್ಕೆ ಆಗಮಿಸಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed